ಮಾಧ್ಯಮಿಕ ಶಿಕ್ಷಣದ ಗುರಿಗಳು
ಎ. ಲಕ್ಷ್ಮಣಸ್ವಾಮಿ ಮುದಲಿಯಾರ್, ಚೇರ್ಮನ್, ಇಂಡಿಯಾ, ಮಿನಿಸ್ಟ್ರಿ ಆಫ್ ಎಜುಕೇಷನ್ ಅಂಡ್ ಸೋಷಿಯಲ್ ವೆಲ್ಫೇರ್ (1953) ಮಾಧ್ಯಮಿಕ ಶಿಕ್ಷಣದ ಗುರಿಗಳು ರಿಪೋರ್ಟ್ ಆಫ್ ದ ಸೆಕಂಡರಿ ಎಜುಕೇಷನ್ ಕಮಿಷನ್ ಮುದಲಿಯಾರ್ ಕಮಿಷನ್ ರಿಪೋರ್ಟ್.
|
Fulltext Document
Aims of Secondary Education.pdf Download (184kB) |
Introduction
ಪ್ರತಿಯೊಬ್ಬ ವ್ಯಕ್ತಿಯನ್ನೂ ಮನುಷ್ಯನೆಂದು ಕಾಣಬೇಕು ಎಂದು ಪ್ರಜಾಪ್ರಭುತ್ವವು ಹೇಳುತ್ತದೆ. ಆದರೆ ಅದಕ್ಕೆ ವಿಪರೀತವಾಗಿ ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ, ಜನಾಂಗೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳಿಂದ ಮನುಷ್ಯನನ್ನು ಅಳೆಯಲಾಗುತ್ತಿದೆ. ಇದನ್ನು ಹೋಗಲಾಡಿಸಬೇಕೆಂಬುದೇ ಶಿಕ್ಷಣದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ವ್ಯವಸ್ಥೆಯು ನಮ್ಮ ಹವ್ಯಾಸಗಳು, ನಡವಳಿಕೆಗಳು ಮತ್ತು ಗುಣಲಕ್ಷಣಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಬೇಕಿದೆ. ಒಬ್ಬ ನಾಗರೀಕನು ಎಲ್ಲ ರೀತಿಯ ಸಂಕೀರ್ಣ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಗತಿಗಳ ಕುರಿತಂತೆ ತನ್ನದೇ ಆದ ಸ್ವತಂತ್ರ ತೀರ್ಮಾನಗಳನ್ನು ಕೈಗೊಳ್ಳಬೇಕು ಮತ್ತು ಬಹುತೇಕವಾಗಿ ತನ್ನ ಕೆಲಸಗಳನ್ನು ಸ್ವತಂತ್ರವಾಗಿ ನಿರ್ಧರಿಸಬೇಕು. ಹೀಗೆ ನಡೆಯಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಪರಿಪೂರ್ಣ ಮತ್ತು ಸರ್ವಾಗೀಣ ಅಭಿವೃದ್ಧಿಯು ಆಗಬೇಕು. ಇದಕ್ಕಾಗಿ ಶಿಕ್ಷಣವು ಆತನ ಎಲ್ಲ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಂತಹ ಶಿಕ್ಷಣವು ಪ್ರಜಾತಾಂತ್ರಿಕವಾದ ಶಿಕ್ಷಣವಾಗಿರುತ್ತದೆ. ಈ ಕುರಿತು ಪರಾಮರ್ಶಿಸುವುದು ಶಿಕ್ಷಣ ಚಿಂತಕರ ಜವಾಬ್ದಾರಿಯಾಗಿರುತ್ತದೆ. ಈ ಲೇಖನದಲ್ಲಿ ಶಿಕ್ಷಣದ ಎಲ್ಲ ಹಂತಗಳಲ್ಲಿ ತಾಂತ್ರಿಕ ನೈಪುಣ್ಯ ಮತ್ತು ದಕ್ಷತೆಗೆ ಉತ್ತೇಜನ ನೀಡುವ ಅಗತ್ಯವಿರುವುದನ್ನು ವಿವರವಾಗಿ ವಿಶ್ಲೇಷಿಸಲಾಗಿದೆ. ಇದರಿಂದ ಕೈಗಾರಿಕೆ ಮತ್ತು ತಂತ್ರಜ್ಞಾನದ ಪ್ರಗತಿಯ ಯೋಜನೆಗಳಲ್ಲಿ ತೊಡಗಿಕೊಳ್ಳಲು, ತರಬೇತಿ ಹೊಂದಿದ ಹಾಗೂ ದಕ್ಷ ಸಿಬ್ಬಂದಿಯನ್ನು ನೀಡಲು ಸಾಧ್ಯವಾಗುತ್ತದೆ. ಹಿಂದೆಲ್ಲ, ಶಿಕ್ಷಣವು ತೀರ ಶೈಕ್ಷಣಿಕ ಹಾಗೂ ಸೈದ್ಧಾಂತಿಕವಾಗಿತ್ತು. ಈ ಕಾರಣದಿಂದಾಗಿ ಅದು ಕೌಶಲ್ಯಪೂರ್ಣ ಔದ್ಯೋಗಿಕ ಸಿಬ್ಬಂದಿಗಳನ್ನು ತಯಾರು ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಈ ಅಂಶಗಳನ್ನು ಪರಿಗಣಿಸಿ ಸುಧಾರಿಸಲಾಗಿರುವುದನ್ನು ಈ ಲೇಖನವು ಚರ್ಚಿಸುತ್ತದೆ.
| Item Type: | Article |
|---|---|
| Discipline: | Curriculum and Pedagogy in Social Studies |
| Programme: | Postgraduate Programmes > MA in Education |
| Title(English): | Aims of Secondary Education |
| Creators(English): | India, Ministry of Education and Social Welfare A Lakshmanswami Mudaliar, Chairman |
| Publisher: | Delhi, Controller of Publications |
| Journal or Publication Title(English): | Report Of The Secondary Education Commission Mudaliar Commission Report |
| Contributors: | Translator: Manjunath Chand; Reviewer: Eshwarchandra Vidyasagar; Copy Editor: Shailaja |
| URI: | http://anuvadasampada.informaticsglobal.ai/id/eprint/5476 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
